Dundiraj biography of williams

About the Author

ಎಚ್. ಡುಂಡಿರಾಜ್, ಕನ್ನಡದ ಹೆಸರಾಂತ ಚುಟುಕು ಕಾವ್ಯ ಸಾಹಿತಿ. ಈವರೆಗೆ ಸುಮಾರು 45 ಪುಸ್ತಕಗಳನ್ನು ಬರೆದಿರುವ ಇವರು, ತಮ್ಮ ಪುಸ್ತಕಗಳಲ್ಲಿ ಚುಟುಕು ಸಾಹಿತ್ಯದ ಕುರಿತಾಗಿನ ಎಳೆಗಳನ್ನು ಸೂಕ್ಷ್ಮವಾಗಿ ಬಿಡಿಸಿಟ್ಟಿದ್ದಾರೆ. ಸಾಹಿತ್ಯ ಮತ್ತು ಹಾಸ್ಯದ ಸಮ್ಮಿಲನ ಇವರ ಕೃತಿಗಳ ವಿಶೇಷತೆ. 
ಉಡುಪಿ ಜೆಲ್ಲೆಯ ಹಟ್ಟಿಕುದ್ರುವಿನಲ್ಲಿ 18 ಆಗಸ್ಟ್ 1956ರಲ್ಲಿ ಜನಿಸಿದ ಇವರು, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ. ಪದವಿಯನ್ನು ಪಡೆದಿದ್ದಾರೆ. ಸದ್ಯಕ್ಕೆ ಮಂಗಳೂರಿನ ಕಾರ್ಪೋರೇಶನ್‍ ಬ್ಯಾಂಕ್‍ನ ಸಹಾಯಕ ಮಹಾ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ. 
2011ರಲ್ಲಿ ನಡೆದ ಸಂಯುಕ್ತ ಅರಬ್‍ ಸಂಸ್ಥಾನದ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಇವರು, ತಮ್ಮ ಕೃತಿಗಳಲ್ಲಿ ರಾಜಕೀಯ, ಕ್ರೀಡೆ ಮತ್ತು ಇತರ ಸಾಮಾಜಿಕ ವಸ್ತುಸ್ಥಿತಿಗಳ ಕುರಿತಾಗಿ ಚುಟುಕು ಕಾವ್ಯ ಹಾಗು ಗದ್ಯವನ್ನು ರಚಿಸಿದ್ದಾರೆ. ಇವರ ಚುಟುಕು ಕಾವ್ಯಗಳು ಉದಯವಾಣಿ ದಿನಪತ್ರಿಕೆಯಲ್ಲಿ ಪ್ರತಿದಿನವೂ ಪ್ರಕಟವಾಗುತ್ತಿದ್ದು ಅಪಾರ ಜನಮನ್ನಣೆ ಗಳಿಸಿದೆ. 
ಪ್ರಶಸ್ತಿಗಳು: 
ಕನ್ನಡ ಸಾಹಿತ್ಯಕ್ಕೆ ಇವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಇವರಿಗೆ ಹಲವಾರು ಪ್ರಶಸ್ತಿಗಳು ದೊರಕಿವೆ. 
2006ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ, 2011ರಲ್ಲಿ ಧ್ವನಿ ಪ್ರತಿಷ್ಠಾನ ದುಬೈನಲ್ಲಿ ನೀಡಿದ ಚುಟುಕು ಚಕ್ರವರ್ತಿ ಬಿರುದು, ಆರ್ಯಭಟ ಪ್ರಶಸ್ತಿ, ಮುದ್ಧಣ್ಣ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿ ಮತ್ತು ಬಿರುದುಗಳು ಇವರ ಮುಡಿ ಸೇರಿವೆ.

ಎಚ್. ಡುಂಡಿರಾಜ್

(18 Aug 1956)

BY THE AUTHOR

ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿದ್ದಾಗ ಗ್ರಾಹಕರಿಗೆ ಪದ್ಯಗಳನ್ನೂ ಸೇರಿಸಿ ಪತ್ರ ಬರೀತಿದ್ದೆ ಇದರಿಂದ ಬ್ಯಾಂಕ್ ವ್ಯವಹಾರ ಹೆಚ್ಚಿತ್ತು - ಎಚ್.ಡುಂಡಿರಾಜ್‌ ಎಚ್‌. ಡುಂಡಿರಾಜ್‌ ಅವರ ಹಾಸ್ಯ ನೀವೆಲ್ಲಾ ಕೇಳಿದ್ದೀರಿ ಆದರೆ ಅವರ ಸಾಹಿತ್ಯ ಪ್ರೀತಿಯ ಬಗ್ಗೆ ನಿಮ್ಗೆ ಗೊತ್ತಿದ್ಯಾ...!? ಬುಕ್‌ ಬ್ರಹ್ಮದ ಸಂಪಾದಕರಾದ ದೇವು ಪತ್ತಾರ ಅವರು ನಡೆಸಿಕೊಡುವ ʼಮುಖಾಮುಖಿʼ ಸಂದರ್ಶನ.ತಪ್ಪದೇ ವೀಕ್ಷಿಸಿ.....

ಬುಕ್‌ ಬ್ರಹ್ಮ ʼಪಂಚ್‌ ಲೈನ್‌ʼ ಕಾರ್ಯಕ್ರಮದಲ್ಲಿನ ಸಿಂಪಲ್‌ ಪ್ರಶ್ನೆಗಳಿಗೆ ಸಖತ್‌ ಉತ್ತರ ಕೊಟ್ಟಿದ್ದಾರೆ ಎಚ್.ಡುಂಡಿರಾಜ್‌.



Comments

Thank you for Subscribing

©2025 Book Brahma Private Limited.